ಉತ್ತರ ಖಗೋಳಾಕಾಶದ ಪ್ರಮುಖ ನಕ್ಷತ್ರ ಪುಂಜಗಳ ಪೈಕಿ ಒಂದು (ಅರ್ಸ ಮೈನರ್). ಇದು ಉತ್ತರಧ್ರುವೀಯ ನಕ್ಷತ್ರ ಪುಂಜ. ಧ್ರುವನಕ್ಷತ್ರ (ಪೋಲಾರಿಸ್) ಮತ್ತು ಡ್ರೇಕೋ ನಕ್ಷತ್ರ ಪುಂಜಗಳ ನಡುವೆ ಇದೆ. ಇದರ ಪ್ರಮುಖತಾರೆ, 1.99ϑ ಕಾಂತಿಮಾನದ ಧ್ರುವನಕ್ಷತ್ರ (ಅಲ್ಪ ಅರ್ಸೆ ಮೈನೊರಿಸ್). ಎರಡನೆಯ ಮತ್ತು ಮೂರನೆಯ ಕಾಂತಿಮಾನದ ತಾರೆಗಳು β ಮತ್ತು γ ಧ್ರುವನಕ್ಷತ್ರದ ವಿಷುವದಂಶ 2ಗಂ. 10ಮಿ. 01ಸೆ., ಘಂಟಾವೃತ್ತಾಂಶ 89ಲಿ 09’51" ಉ. ನಿರಪೇಕ್ಷ ಕಾಂತಿಮಾನ-4.6. ರೋಹಿತ ಪ್ರರೂಪ ಈ8. ಸೂರ್ಯನಿಂದ 680 ಬೆಳಕುವರ್ಷಗಳ ದೂರದಲ್ಲಿದೆ. ಇದೊಂದು ಚರಕಾಂತೀಯ ನಕ್ಷತ್ರ. ತೆರೆದ ಚಿಕ್ಕ ಸೌಟಿನ ಆಕಾರದಲ್ಲಿ ಇರುವುದರಿಂದ ಇದನ್ನು ಲಿಟ್ಲ್ ಡಿಪ್ಪರ್ ಎಂದೂ ಹೆಚ್ಚುಕಡಿಮೆ ಸಪ್ತರ್ಷಿ ಮಂಡಲದಂತೆಯೇ ಈ ಪುಂಜದ ಆಕಾರ ಇರುವುದರಿಂದ ಇದನ್ನು ಲಘುಸಪ್ತರ್ಷಿ ಎಂದೂ ಕರೆಯುವುದಿದೆ. ಈ ಪುಂಜದ ಇದರ ನಕ್ಷತ್ರಗಳು ಬೀಟ ಕೊಕ್ಯಾಬ್, ಗಾಮ ಫಿರ್ಕಾಡ್ ಮೇಜರ್, ಜೀಟ ಆಲೀಫ, ಡೆಲ್ಟ ಯಿಲ್ಡನ್, ಈಟ, ಎಪ್‍ಸೈಲಾನ್. ಬೀಟ ಕೊಕ್ಯಾಬ್ ಎಂಬುದು ಕಿತ್ತಳೆವರ್ಣದ ಉಪದೈತ್ಯ ನಕ್ಷತ್ರ. ಸೂರ್ಯನಿಂದ ಸುಮಾರು 95 ಬೆಳಕುವರ್ಷಗಳ ದೂರದಲ್ಲಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ